ಹಾಪುರ್: ಉತ್ತರ ಪ್ರದೇಶದ ಹಾಪುರದಲ್ಲಿ ಹೆದ್ದಾರಿಯಲ್ಲಿ ಹೋಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಹೋಟೆಲ್ಗೆ ನುಗ್ಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಅತಿ ವೇಗದಲ್ಲಿ ಹೋಗುತ್ತಿದ್ದ ಸ್ವಿಫ್ಟ್ ಕಾರು ರಾಷ್ಟ್ರೀಯ ಹೆದ್ದಾರಿ 9ರಲ್ಲಿರುವ ಹೋಟೆಲ್ಗೆ ನುಗ್ಗಿದೆ. ವ್ಯಕ್ತಿಯೊಬ್ಬರು ಫುಡ್ ಕೋರ್ಟ್ ಎದುರು ಮೆಟ್ಟಿಲುಗಳ ಮೇಲೆ ನಿಂತಿರುವುದನ್ನು ಕಾಣಬಹುದು. ಕಾರು ಇದ್ದಕ್ಕಿದ್ದಂತೆ ಬಂದು ಇಬ್ಬರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮುಂದೆ ಹೋಗಿ ಬಿದ್ದಿದ್ದಾರೆ.
ಮೂರನೇ ವ್ಯಕ್ತಿ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರು ವ್ಯಕ್ತಿಯನ್ನು ಎಳೆದುಕೊಂಡು ಫುಡ್ ಕೋರ್ಟ್ ಬಳಿ ನಿಲ್ಲುತ್ತಿದ್ದಂತೆ ಜನರು ಸ್ಥಳಕ್ಕೆ ಬಂದು ಸಿಲುಕಿದವರನ್ನು ಕಾರಿನಿಂದ ಕೆಳಗಿನಿಂದ ಹೊರಗೆಳೆಯುತ್ತಿದ್ದುದನ್ನು ಕಾಣಬಹುದು.
ಬುಲಂದ್‌ಶಹರ್ ನಿವಾಸಿ ಅಜಿತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ನಂತರ, ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಚಾಲಕನನ್ನು ಗುರುತಿಸಿ ವಶಕ್ಕೆ ಪಡೆಯಲು ಹತ್ತಿರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.