11
ಕಾಸರಗೋಡು: ಬದಿಯಡ್ಕ ಸಮೀಪದ ಬಾಂಜತ್ತಡ್ಕ ಇಕ್ಕೇರಿ ಎಂಬಲ್ಲಿ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಾರ್ಮಿಕನ ಮೃತದೇಹ ಪತ್ತೆಯಾದ ಘಟನೆ ನಡೆದಿದೆ.
ಮೃತಪಟ್ಟವರು ಬಾಂಜತ್ತಡ್ಕ ಇಕ್ಕೇರಿಯ ವಿ.ವಿ.ಪ್ರಕಾಶ್ (40) ಎಂದು ತಿಳಿದು ಬಂದಿದೆ.
ತೆಂಗಿನಕಾಯಿ ಕೊಯ್ಯುವ ಕಾಯಕ ಮಾಡಿಕೊಂಡಿದ್ದ ಪ್ರಕಾಶ್ ಜೂನ್ 18 ರಂದು ಮಧ್ಯಾಹ್ನ ದಿಂದ ನಾಪತ್ತೆಯಾಗಿದ್ದರು. ಈ ಕುರಿತು ಪತ್ನಿ ಬದಿಯಡ್ಕ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.
ಭಾನುವಾರ ಇಕ್ಕೇರಿ ಸಮೀಪದ ಹೊಳೆಯ ಬದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.