ಮಡಿಕೇರಿ: ಪೊಲೀಸರ ಮನೆಯ ಬೀಗ ಮುರಿದು ರಾಜಾರೋಷವಾಗಿ ಮನೆಗೆ ನುಗ್ಗಿ ಬೀರು, ಅಲ್ಮೇರಗಳಲ್ಲಿ ಹುಡುಕಿ ಕೈಗೆ ಸಿಕ್ಕಷ್ಟು ಹಣ, ಚಿನ್ನಾಭರಣದೊಂದಿಗೆ ಖದೀಮರು ಪರಾರಿಯಾಗಿದ್ದಾರೆ.
ಕೊಡಗು ಜಿಲ್ಲೆ ಮಡಿಕೇರಿ ನಗರದ ರೈಫಲ್ ರೇಂಜ್ ಬಡಾವಣೆಯಲ್ಲಿ ಪೊಲೀಸರ ಮನೆಗಳೇ ಕಳ್ಳತನ ಆಗಿವೆ. ರೈಫಲ್ ರೇಂಜ್‌ನಲ್ಲಿರೋ ಪೊಲೀಸ್ ವಸತಿ ಸಮುಚ್ಛಯಕ್ಕೆ ರಾತ್ರಿ ನುಗ್ಗಿರುವ ಖದೀಮರು, ಬರೋಬ್ಬರಿ 9 ಮನೆಗಳನ್ನ ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಯಾವ ಮನೆಯಲ್ಲಿ ಸಿಬ್ಬಂದಿ ಇಲ್ವೋ ಅಂತಹ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡಿದ್ದಾರೆ. ಜಯಚಂದ್ರ ಎಂಬವರ ಮನೆಯಿಂದ 95 ಸಾವಿರ ರೂಪಾಯಿ ನಗದು, ಮೂರು ಗ್ರಾಂ ಚಿನ್ನಾಭರಣ ದೋಚಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಇನ್ನೂ ಅನೇಕರ ಮನೆಗಳಿಗೆ ನುಗ್ಗಿರುವ ಕಳ್ಳರು, ನಗ ನಾಣ್ಯ ದೋಚಿದ್ದಾರೆ. ಎಷ್ಟು ದೋಚಿದ್ದಾರೆ ಎಂಬುವುದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಕುರಿತು ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.