ತೀರ್ಥಹಳ್ಳಿ: ತುಂಗಾ ನದಿಗೆ ಪರ್ಯಾಯವಾಗಿ ಅಡ್ಡಲಾಗಿ ಕಟ್ಟಿರುವ ಹೊಸ ಸೇತುವೆ ಮೇಲೆ ವಾಹನ ಓಡಾಡುವ ಸಂದರ್ಭದಲ್ಲಿ ಯುವಕರು ಹುಚ್ಚಾಟ ಮೆರೆದು ರೀಲ್ಸ್ ಮಾಡಿದ ಘಟನಾ ಸಂಬಂಧ ರೀಲ್ಸ್ ಮಾಡಿದ ಯುವಕರನ್ನು ತೀರ್ಥಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಸುಷ್ಮಾ ರವರು ಕರೆದು ವಿಚಾರಣೆ ನಡೆಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ರೀಲ್ಸ್ ಮಾಡಿದ ಯುವಕನ ಮೇಲೆ ಸಣ್ಣದೊಂದು ಪ್ರಕರಣ ದಾಖಲಿಸಿ ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಹುಚ್ಚಾಟ ಮಾಡಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಯಾವುದೇ ವ್ಯಕ್ತಿಯಾಗಲಿ ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್ ಮಾಡುವುದು, ಸಾರ್ವಜನಿಕ ಆಸ್ತಿ ಪಾಸ್ತಿ ಹಾಳು ಮಾಡುವುದು, ಅಥವಾ ಹೊಸ ಸೇತುವೆ ಮೇಲೆ ಅಸಭ್ಯ ವರ್ತನೆ ಮಾಡುವುದು ಕಂಡು ಬಂದಲ್ಲಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.