9
ಬೆಳಗಾವಿ: ತಾಲೂಕಿನ ಪಂಚಬಾಳೇಕುಂದ್ರಿ ಗ್ರಾಮದಿಂದ ಸಿಬಿಟಿಗೆ ಬರುತ್ತಿದ್ದ ಬಸ್ನಲ್ಲಿ ಕಿಟಕಿ ಪಕ್ಕದ ಸೀಟ್ಗಾಗಿ ಯುವಕರ ಮಧ್ಯೆ ಗಲಾಟೆ ನಡೆದು ಓರ್ವ ಯುವಕನಿಗೆ ಚಾಕು ಇರಿದಿರುವ ಘಟನೆ ವರದಿಯಾಗಿದೆ.
ಗ್ರಾಮದ ಮಜ್ಜು ಸನದಿ(20) ಚಾಕು ಇರಿತಕ್ಕೊಳಗಾದ ಯುವಕ ಎಂದು ತಿಳಿದು ಬಂದಿದೆ.
ಯುವಕನ ಎದೆ ಭಾಗಕ್ಕೆ ಯುವಕರ ತಂಡವೊಂದು ಚಾಕು ಇರಿದು ಪರಾರಿಯಾಗಿದೆ ಎಂದು ತಿಳಿದು ಬಂದಿದೆ.
ಬೆಳಗಾವಿ ಬಿಮ್ಸ್ ಆಸ್ಪತ್ರೆ ಐಸಿಯುನಲ್ಲಿ ಮಜ್ಜುಗೆ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.