ಕೊಚ್ಚಿ: ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಕೊಚ್ಚಿಯಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
6E2706 ವಿಮಾನವು ಬೆಳಗ್ಗೆ 9.20ಕ್ಕೆ ಕೊಚ್ಚಿ ವಿಮಾನ ನಿಲ್ದಾಣದಿಂದ ಹೊರಟು ಮಧ್ಯಾಹ್ನ 12.35ಕ್ಕೆ ದೆಹಲಿಯಲ್ಲಿ ಇಳಿಯಬೇಕಿತ್ತು. ಪ್ರಯಾಣಿಕರನ್ನು ನಾಗ್ಪುರದಲ್ಲಿ ಸುರಕ್ಷಿತವಾಗಿ ಇಳಿಸಲಾಗಿದ್ದು ತನಿಖೆ ನಡೆಯುತ್ತಿದೆ.
ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವು ಮಂಗಳವಾರ ಬೆಳಗ್ಗೆ ಬಾಂಬ್ ಬೆದರಿಕೆ ಕರೆ ಸ್ವೀಕರಿಸಿತ್ತು ಎಂದು ಕೊಚ್ಚಿ ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ವಿಮಾನ ಸಂಖ್ಯೆಯನ್ನು ಕೂಡ ಉಲ್ಲೇಖಿಸಲಾಗಿದೆ. ಅಧಿಕೃತವಾಗಿ ವಿಮಾನದ ಸಂಖ್ಯೆ ನೀಡಿದಾಗ ಬೆದರಿಕೆ ಬಂದಿದ್ದು ಸತ್ಯ ಎಂದು ನಂಬಬಹುದು.
ವಿಮಾನವು ಆಗಲೇ ಕೊಚ್ಚಿಯಿಂದ ಹೊರಟಿತ್ತು, ಆದ್ದರಿಂದ ಅದನ್ನು ನಾಗ್ಪುರಕ್ಕೆ ತಿರುಗಿಸಲಾಯಿತು ಎಂದು ವರದಿ ತಿಳಿಸಿದೆ.