ರಿಯಾದ್: ತನ್ನ ಕೊಠಡಿಯ ಎಸಿ ಸ್ಫೋಟಗೊಂಡು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇರಳ ಮೂಲದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರರನ್ನು ಎರ್ನಾಕುಲಂನ ಪರವೂರ್‌ನ ಮಂಜಲಿ ನಿವಾಸಿ ಬಶೀರ್ ಅವರ ಪುತ್ರ ಜಿಯಾದ್ (36) ಎಂದು ಗುರುತಿಸಲಾಗಿದೆ.
ಜಿಯಾದ್ ರಿಯಾದ್‌ನ ಎಕ್ಸಿಟ್ 8 ರಲ್ಲಿ ಮನೆ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಮಧ್ಯಾಹ್ನ ಎಸಿ ಕಂಪ್ರೆಸರ್ ಸ್ಫೋಟಗೊಂಡು ಈ ಅಪಘಾತ ಸಂಭವಿಸಿದೆ.
ತೀವ್ರ ಸುಟ್ಟಗಾಯಗಳಿಗೆ ಒಳಗಾದ ಜಿಯಾದ್ ಅವರನ್ನು ತಕ್ಷಣ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು ಎಂದು ವರದಿ ತಿಳಿಸಿದೆ.
ಚಿಕಿತ್ಸೆ ಪಡೆಯುತ್ತಿದ್ದ ಜಿಯಾದ್ ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಸೋಮವಾರದಂದು ಮಧ್ಯಾಹ್ನ ರಿಯಾದ್‌ನ ಹಯ್ ಸಲಾಮ್ ಮಕ್ಬರಾದಲ್ಲಿ ಮೃತದೇಹ ದಫನ ಮಾಡಲಾಗುವುದು ಎಂದು ವರದಿ ತಿಳಿಸಿದೆ.