12
ಮೂಡುಬಿದಿರೆ: ಮೂಡುಬಿದಿರೆಯ ಕಾಂಗ್ರೆಸ್ ಮುಖಂಡರಾಗಿದ್ದ ದಿವಂಗತ ರಾಘು ಕೋಟ್ಯಾನ್ ಸಂಪಿಗೆ ಅವರ ಪುತ್ರ ಮುಂಬೈನಲ್ಲಿ ಜೂ.16 ರಂದು ರೈಲಿನಿಂದ ಬಿದ್ದು ಮೃತಪಟಿದ್ದಾರೆ ಎಂದು ವರದಿಯಾಗಿದೆ.
ಮೃತಪಟ್ಟವರು ಶಶಿ ಕೋಟ್ಯಾನ್ (32) ಎಂದು ತಿಳಿದು ಬಂದಿದೆ.
ಶಶಿ ಅವರು ಮುಂಬೈನಲ್ಲಿ ಉದ್ಯೋಗದಲ್ಲಿದ್ದರು. ಅವರ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದು, ಹೆಚ್ಚಿನ ಮಾಹಿತಿ ಪಡೆಯಲು ಕುಟುಂಬ ಸದಸ್ಯರು ಮುಂಬೈಗೆ ತೆರಳಿದ್ದಾರೆ. ಘಟನೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.