Home News ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟ ನರ್ಸ್ ಬಗ್ಗೆ ಅವಹೇಳನಕಾರಿ ಪೋಸ್ಟ್: ಉಪ ತಹಶೀಲ್ದಾರ್ ಅಮಾನತು

ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟ ನರ್ಸ್ ಬಗ್ಗೆ ಅವಹೇಳನಕಾರಿ ಪೋಸ್ಟ್: ಉಪ ತಹಶೀಲ್ದಾರ್ ಅಮಾನತು

by admin
0 comments

ಕಾಸರಗೋಡು: ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟ ಕೇರಳ ಮೂಲದ ನರ್ಸ್ ರಂಜಿತಾ ಜಿ. ನಾಯರ್ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ಅವಹೇಳನಕಾರಿ ಪೋಸ್ಟ್ ಮಾಡಿದ ವೆಳ್ಳರಿಕುಂಡು ತಾಲೂಕು ಉಪ ತಹಶೀಲ್ದಾರ್ ಎ. ಪವಿತ್ರನ್ ನನ್ನು ಸೇವೆಯಿಂದ ಅಮಾನತುಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಜಿಲ್ಲಾಧಿಕಾರಿ ಕೆ. ಇಂಪಾಶೇಖರ್ ರವರ ಆದೇಶದಂತೆ ಉಪ ತಹಶೀಲ್ದಾರ್ ಎ. ಪವಿತ್ರನ್ ನನ್ನು ಸೇವೆಯಿಂದ ಅಮಾನತು ಗೊಳಿಸಲಾಗಿದೆ.

ಲಂಡನ್ ನಲ್ಲಿ ನರ್ಸ್ ಆಗಿದ್ದ ಪಥನಂತಿಟ್ಟದ ರಂಜಿತಾ ಅವರ ಉದ್ಯೋಗ ಹಾಗೂ ಜಾತಿಯನ್ನು ಅವಮಾನ ಮಾಡಿ ಪವಿತ್ರನ್ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದರು. ವಿವಾದ ಉಂಟಾಗುತ್ತಿದ್ದಂತೆ ಫೇಸ್ ಬುಕ್ ಪೋಸ್ಟ್ ನ್ನು ಡಿಲೀಟ್ ಮಾಡಿದ್ದರು. ಈ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಕೆ.ಇಂಪಾಶೇಖರ್ ಗೆ ರಾಜ್ಯ ಕಂದಾಯ ಸಚಿವ ಕೆ. ರಾಜನ್ ಆದೇಶ ನೀಡಿದ್ದರು ಎಂದು ತಿಳಿದು ಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಬಗ್ಗೆ ಮಹಿಳಾ ಸಂಘಟನೆ ಸೇರಿದಂತೆ ಲಭಿಸಿದ ದೂರಿನಂತೆ ಪವಿತ್ರನ್ ರನ್ನು ಶುಕ್ರವಾರ ಸಂಜೆ ವೆಳ್ಳರಿಕುಂಡು ಪೊಲೀಸರು ಬಂಧಿಸಿದ್ದಾರೆ.

banner

ಈ ಕುರಿತು ಹೆಚ್ಚಿನ ವಿಚಾರಣೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

You may also like

Leave a Comment

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.

Latest Articles