Home News ಕಂಟೈನರ್ ಲಾರಿಯಲ್ಲಿ ಬೆಂಕಿ ಅನಾಹುತ: ಹಲವು ಫ್ರಿಡ್ಜ್ ಗಳಿಗೆ ಹಾನಿ

ಕಂಟೈನರ್ ಲಾರಿಯಲ್ಲಿ ಬೆಂಕಿ ಅನಾಹುತ: ಹಲವು ಫ್ರಿಡ್ಜ್ ಗಳಿಗೆ ಹಾನಿ

by admin
0 comments

ಕಾಸರಗೋಡು: ಕಾಸರಗೋಡು-ಕಾಞಾಂಗಾಡ್ ರಾಜ್ಯ ಹೆದ್ದಾರಿಯಲ್ಲಿ ಕಂಟೈನರ್ ಲಾರಿಯಲ್ಲಿ ಬೆಂಕಿ ಅನಾಹುತ ಉಂಟಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಪುಣೆಯಿಂದ ಕೋಜಿಕ್ಕೋಡ್‌ಗೆ ರೆಫ್ರಿಜರೇಟರ್ ಸಾಗಿಸುತ್ತಿದ್ದ ಲಾರಿಯಲ್ಲಿ ಈ ಅನಾಹುತ ನಡೆದಿದೆ. ರಾಜ್ಯ ಹೆದ್ದಾರಿಯ ಕೂವತ್ತೊಟ್ಟಿ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ವಿದ್ಯುತ್ ತಂತಿ ಮೇಲ್ಭಾಗಕ್ಕೆ ತಗಲಿದ ಪರಿಣಾಮ ಬೆಂಕಿ ತಗಲಿ ರಬಹುದು ಎಂದು ಶಂಕಿಸಲಾಗಿದೆ. ಕಾಸರಗೋಡಿನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬಂದಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.

ಕಂಟೈನರ್‌ನೊಳಗಿದ್ದ ಹತ್ತಕ್ಕೂ ಅಧಿಕ ರೆಫ್ರಿಜರೇಟರ್ ಭಾಗಶಃ ಬೆಂಕಿಯಿಂದ ಹಾನಿ‍ಗೊಳಗಾಗಿದೆ. ಕಂಟೈನರ್‌ನ ಲಾಕರ್ ಮುರಿದು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.

banner

ಬೆಂಕಿ ನಂದಿಸಿದ ಬಳಿಕ ರೆಫ್ರಿಜರೇಟರನ್ನು ಹೊರತೆಗೆದರೂ ಹತ್ತರಷ್ಟು ರೆಫ್ರಿಜರೇಟರ್‌ಗಳು ಹಾನಿಗೊಂಡಿದೆ. ಉಳಿದ ರೆಫ್ರಿಜರೇಟರ್‌ಗಳನ್ನು ಕಂಟೈನರ್‌ನಿಂದ ಕೆಳಗಿಸಿ ಅನಾಹುತದಿಂದ ತಪ್ಪಿಸಲಾಯಿತು ಎಂದು ತಿಳಿದು ಬಂದಿದೆ.

You may also like

Leave a Comment

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.

Latest Articles

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.