Home News ಖರ್ಚಿಗೆ ಹಣವಿಲ್ಲವೆಂದು ಖೋಟಾ ನೋಟು ಪ್ರಿಂಟ್ ಮಾಡಿದ ಆರೋಪಿಯ ಬಂಧನ

ಖರ್ಚಿಗೆ ಹಣವಿಲ್ಲವೆಂದು ಖೋಟಾ ನೋಟು ಪ್ರಿಂಟ್ ಮಾಡಿದ ಆರೋಪಿಯ ಬಂಧನ

by admin
0 comments

ಬೆಂಗಳೂರು: ಖರ್ಚಿಗೆ ಹಣವಿಲ್ಲವೆಂದು ಟೆಕ್ಸ್​​ಟೈಲ್ಸ್​ ಉದ್ಯಮಿ ಪುತ್ರನೋರ್ವ ಖೋಟಾ ನೋಟು ಪ್ರಿಂಟ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಕಲಿ ನೋಟು ಪ್ರಿಂಟ್ ಮಾಡಿದ ಯುವಕ ಕ್ರಿಷ್ ಮಾಲಿ (23) ಎಂದು ತಿಳಿದು ಬಂದಿದೆ.

ಟೆಕ್ಸ್ ಟೈಲ್ಸ್ ಉದ್ಯಮಿಯೊಬ್ಬರ ಪುತ್ರನಾಗಿರುವ ಕ್ರಿಷ್ ಮಾಲಿ ಖೋಟಾ ನೋಟು ಪ್ರಿಂಟ್ ಮಾಡಲೆಂದೇ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿಕೊಂಡಿದ್ದ. ಹೊಟೇಲ್ ಗೆ ಬರುವಾಗ ಬ್ಯಾಗ್‌ನಲ್ಲಿ ಪ್ರಿಂಟರ್, ಸ್ಕ್ಯಾನರ್‌ಗಳನ್ನ ತಂದಿದ್ದು, ಹೋಟೆಲ್‌ನಲ್ಲಿ ಕುಳಿತೇ 500 ರೂ. ಮುಖಬೆಲೆಯ ನಕಲಿ ನೋಟು ಪ್ರಿಂಟ್ ಮಾಡಿದ್ದಾನೆ. ಬಳಿಕ ರೂಮ್​ ಬಾಯ್​ ಕ್ಲೀನ್ ಮಾಡಲು ಬಂದಾಗ ವಿಚಾರ ಬೆಳಕಿಗೆ ಬಂದಿದೆ.

ಟೆಕ್ಸ್ ಟೈಲ್ಸ್ ಉದ್ಯಮಿಯೊಬ್ಬರ ಮಗನಾಗಿರುವ ಕ್ರಿಷ್ ಮಾಲಿ, ಮನೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿಕೊಂಡಿದ್ದ. ಬಳಿಕ ತನ್ನ ಬಳಿಯಿರುವ ಹಣ ಸಾಕಾಗುವುದಿಲ್ಲ ಎಂದು ಯೋಚಿಸಿ ತಾನೇ ಖೋಟ ನೋಟ್ ಪ್ರಿಂಟ್ ಮಾಡುವ ಪ್ಲಾನ್ ಹಾಕಿದ್ದ. ಹೀಗಾಗಿ ಆನ್‌ಲೈನ್‌ ಮೂಲಕ ರೂಮ್ ಬುಕ್ ಮಾಡಿದ್ದ. ಜೂನ್ 1 ರಂದು ರೂಮ್ ಬುಕ್ ಮಾಡಿಕೊಂಡು ಮೂರು ದಿನ ಅಲ್ಲೇ ತಂಗಿದ್ದಾನೆ. ಬಳಿಕ ಜೂನ್ 7ರಂದು ಹೋಟೆಲ್‌ನಿಂದ ಚೆಕ್ ಔಟ್ ಆಗುವಾಗ ನಕಲಿ ನೋಟುಗಳ ಮೂಲಕ ಬಿಲ್ ಪಾವತಿ ಮಾಡಿದ್ದಾನೆ.

banner

ರೂಂ ಕ್ಲೀನ್ ಮಾಡುವಾಗ ಆತನ ರೂಂ ಡೆಸ್ಟ್ ಬಿನ್ ನಲ್ಲಿ ಕೆಲ ನಕಲಿ ನೋಟುಗಳು ಪತ್ತೆಯಾಗಿದ್ದು, ಕೂಡಲೇ ರೂಮ್ ಬಾಯ್​ ಹೋಟೆಲ್ ಮ್ಯಾನೇಜರ್ ಗೆ ಈ ವಿಚಾರ ತಿಳಿಸಿದ್ದಾನೆ. ಬಳಿಕ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ, ಕ್ರಿಷ್ ಮಾಲಿ ನೀಡಿದ್ದ ಹಣವನ್ನು ಪರಿಶೀಲನೆ ಮಾಡಿದಾಗ ಅದು ನಕಲಿ ನೋಟು ಎಂಬುದು ತಿಳಿದು ಬಂದಿದೆ.

ಅವು ನಕಲಿ ಎಂದು ತಿಳಿದು ಆತ ತಂಗಿದ್ದ ರೂಮ್‌ನಲ್ಲಿ ಪರಿಶೀಲನೆ ಮಾಡಿದಾಗ ಬಿಳಿ ಹಾಳೆಗಳ ಬಂಡಲ್, ನಕಲಿ ನೋಟಿನ ಚೂರುಗಳು ಪತ್ತೆಯಾಗಿವೆ. ಬಳಿಕ ಹೋಟೆಲ್ ಮ್ಯಾನೇಜರ್ ಮುಹಮ್ಮದ್ ಷರೀಫ್‌ ವುದ್ದೀನ್, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ರೂಮ್ ಬಾಡಿಗೆಗೆ ಪಡೆದುಕೊಳ್ಳುವಾಗ ಆರೋಪಿ ನೀಡಿದ್ದ ಆಧಾರ್‌ನಲ್ಲಿದ್ದ ವಿಳಾಸ ಆಧರಿಸಿ ಕ್ರಿಷ್ ಮಾಲಿನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

You may also like

Leave a Comment

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.

Latest Articles

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.