ಮಂಗಳೂರು: ಜೂನ್ 6 ರಂದು ಯೆಯ್ಯಾಡಿಯಲ್ಲಿ ನಡೆದ ಚೂರಿ ಇರಿತದ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕ ಕೌಶಿಕ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.
ಪ್ರತೀಕಾರದ ದಾಳಿ ಎಂದು ಹೇಳಲಾದ ಈ ಘಟನೆಯು ಹಾಡಹಗಲೇ ನಡೆದಿದ್ದು, ಬಿಜೈನ ಬ್ರಿಜೇಶ್ ಶೆಟ್ಟಿ ಮತ್ತು ಗಣೇಶ್ ಕೌಶಿಕ್ ಹೊಟ್ಟೆಗೆ ಇರಿದು ಹಲ್ಲೆ ಮಾಡಿದ್ದರು ಎಂದು ಹೇಳಲಾಗಿದೆ.
ಈ ಪ್ರಕರಣ ಹಳೆಯ ದ್ವೇಷದ ಕಾರಣದಿಂದ ನಡೆದಿತ್ತು ಎನ್ನಲಾಗಿದೆ. ಆ ಹಿಂದಿನ ವಿವಾದದ ಸಮಯದಲ್ಲಿ, ಬ್ರಿಜೇಶ್ ಕೌಶಿಕ್ ಮೇಲೆ ಹಲ್ಲೆ ನಡೆಸಿದ್ದ ಎಂದು ಹೇಳಲಾಗಿದೆ.
ಕೌಶಿಕ್ ಮೇಲೆ ಪ್ರತೀಕಾರ ತೀರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಹಲ್ಲೆಯ ನಂತರ ಕೌಶಿಕ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು, ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.