ಕಾಸರಗೋಡು: ಅಡೂರು ಚಂದನಕ್ಕಾಡ್ ನ ಸತೀಶ್ ( 48) ಎಂಬವರ ನಿಗೂಢ ಸಾವು ಕೊಲೆ ಎಂದು ಸಾಬೀತಾಗಿದ್ದು, ಈ ಹಿನ್ನಲೆಯಲ್ಲಿ ಈತನ ಗೆಳೆಯನೋರ್ವನನ್ನು ಆದೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿ ಆರೋಪಿ ಚಿದಾನಂದ ಎಂದು ತಿಳಿದು ಬಂದಿದೆ.
ಸತೀಶ್ ರವರು ಮಂಗಳವಾರ ಸಂಜೆ ನೆರೆಮನೆಯ ಮನೆ ಬಳಿ ಅರೆ ಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದರು. ಕಾಸರಗೋಡು ಜನರಲ್ ಆಸ್ಪತ್ರೆಗೆ ತಲಪಿಸಿದರೂ ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದಾಗ ಮೃತದೇಹದಲ್ಲಿ ಆಂತರಿಕ ಗಾಯಗಳು ಪತ್ತೆಯಾಗಿತ್ತು. ಕುತ್ತಿಗೆಯ ಎಲುಬು ಮುರಿದಿರುವುದು ಕಂಡುಬಂದಿದೆ. ಮರಣೋತ್ತರ ಪರೀಕ್ಷೆ ವರದಿಯಂತೆ ಪೊಲೀಸರು ತನಿಖೆ ನಡೆಸಿ ಚಿದಾನಂದನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈತ ತಪ್ಪೊಪ್ಪಿಕೊಂಡಿದ್ದು ಬಳಿಕ ಈತನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಸೋಮವಾರ ಮಧ್ಯಾಹ್ನ ಸತೀಶ್ ಹಾಗೂ ಚಿದಾನಂದ ಸಮೀಪದ ಚೋಮಣ್ಣ ನಾಯ್ಕ್ ಮನೆಯೊಂದರಲ್ಲಿ ಒಟ್ಟಿಗೆ ಸೇರಿದ್ದು, ಈ ಸಂದರ್ಭದಲ್ಲಿ ಪಾನಮತ್ತ ರಾಗಿ ಇಬ್ಬರ ನಡುವೆ ಜಗಳವಾಗಿತ್ತು ಎಂದು ಹೇಳಲಾಗಿದೆ
ಈ ಸಂದರ್ಭ ತಳ್ಳಾಟ ನಡೆದಿದ್ದು, ನೆಲಕ್ಕೆ ಬಿದ್ದ ಸತೀಶ್ ರನ್ನು ಚೋಮಣ್ಣ ನಾಯ್ಕ್ ರ ಮನೆಯ ವರಾಂಡದಲ್ಲಿ ಮಲಗಿಸಿ ಪರಾರಿಯಾಗಿದ್ದನು ಎನ್ನಲಾಗಿದೆ.
ಸತೀಶ್ ಮನೆಗೆ ಬಾರದೆ ಇದ್ದುದರಿಂದ ಸಹೋದರಿ ಮೊಬೈಲ್ ಗೆ ಕರೆ ಮಾಡಿದರೂ ರಿಸೀವ್ ಮಾಡದೆ ಇದ್ದುದರಿಂದ ಶೋಧ ನಡೆಸಿದಾಗ ಸಮೀಪದ ಮನೆಯೊಂದರ ವರಾಂಡ ದಲ್ಲಿ ಬಿದ್ದಿರುವುದು ಕಂಡು ಬಂದಿದೆ. ಬಳಿಕ ಆಸ್ಪತ್ರೆಗೆ ಕೊಂಡೊಯ್ದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಸತೀಶ್ ನ ಅಂತ್ಯಕ್ರಿಯೆ ಯಲ್ಲಿ ಚಿದಾನಂದ ಪಾಲ್ಗೊಳ್ಳದಿರುವುದು ಈತನ ಮೇಲೆ ಸಂಶಯ ಬರಲು ಕಾರಣವಾಗಿತ್ತು. ಸತೀಶ್ ದೈವ ಕಲಾವಿದರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.