Home News ಅಮಾಯಕ ರಹಿಮಾನ್ ಹತ್ಯೆ; ರಾಜ್ಯ ಸರ್ಕಾರ ನೇರಹೊಣೆ: ಎಸ್ ಎಸ್ ಎಫ್ ದ.ಕ ವೆಸ್ಟ್ ಜಿಲ್ಲೆ ಖಂಡನೆ

ಅಮಾಯಕ ರಹಿಮಾನ್ ಹತ್ಯೆ; ರಾಜ್ಯ ಸರ್ಕಾರ ನೇರಹೊಣೆ: ಎಸ್ ಎಸ್ ಎಫ್ ದ.ಕ ವೆಸ್ಟ್ ಜಿಲ್ಲೆ ಖಂಡನೆ

by admin
0 comments

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳತ ಮಜಲು ನಿವಾಸಿ ಅಮಾಯಕ ಅಬ್ದುಲ್ ರಹಿಮಾನ್ ಅವರ‌ಹತ್ಯೆಯನ್ನು ಎಸ್ ಎಸ್ ಎಫ್ ದ.ಕ ವೆಸ್ಟ್ ತೀವ್ರವಾಗಿ ಖಂಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಹತ್ಯೆ ನಡೆದಿದೆ. ದುಡಿದು ತಿನ್ನುವ ಅಮಾಯಕ ಯುವಕ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ. ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ನಿರಂತರವಾಗಿ ಕೋಮುಪ್ರಚೋದನೆ ಭಾಷಣಗಳು ನಡೆಯುತ್ತಿದ್ದರೂ ಸರ್ಕಾರದ ಮೌನವಾಗಿ ಕುಳಿತ ಕಾರಣ ಈ ಹತ್ಯೆಗಳು ನಡೆಯುತ್ತಿವೆ ಎಂದು ಅದು ಆರೋಪಿಸಿದೆ.

ಅಮಾಯಕ ಅಬ್ದುಲ್ ರಹಿಮಾನ್ ಅವರ ಹತ್ಯೆಯ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯ ಸರ್ಕಾರವೇ ವಹಿಸಿಕೊಳ್ಳಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕಾದರೆ ಕೋಮು ಭಾಷಣ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಅದು ಒತ್ತಾಯಿಸಿದೆ.

ಸರ್ಕಾರದ ಕಠಿಣ ಕ್ರಮಗಳು ಹೇಳಿಕೆಗೆ ಮಾತ್ರ ಸೀಮಿತ ವಾಗಿರುವ ಕಾರಣ ಹತ್ಯಾ ಕೋರರು ಇಲ್ಲಿ ವಿಜೃಂಭಿಸುತ್ತಿದ್ದಾರೆ. ಸರ್ಕಾರ ಇನ್ನಾದರೂ ಎಚ್ಚೆತ್ತು ಕೊಂಡು ಕೋಮು ಪ್ರಚೋದನೆ ಭಾಷಣ ಗಳಿಗೆ ಕಡಿವಾಣ ಹಾಕಲಿ ಹಾಗೂ ಅಮಾಯಕ ರಹೀಮ್ ಹತ್ಯೆಯ ಅಪರಾಧಿಗಳಿಗೆ ಅರ್ಹ ಶಿಕ್ಷೆ ಯಾಗುವಂತೆ ಮಾಡಲಿ ಎಂದು ಎಸ್ ಎಸ್ ಎಫ್ ದ.ಕ ವೆಸ್ಟ್ ಜಿಲ್ಲಾ ಸಕಿತಿ ರಾಜ್ಯ ಸರ್ಕಾರ ಮತ್ತು‌ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.

You may also like

Leave a Comment

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.

Latest Articles

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.