22
ಮೈಸೂರು: ನಗರದ ಅಶೋಕಪುರಂನ ಕೇಂದ್ರೀಯ ರೈಲ್ವೆ ವರ್ಕ್ ಶಾಪ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಾಲ್ವರು ಹಿರಿಯ ಅಧಿಕಾರಿಗಳು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳಾ ಸಿಬ್ಬಂದಿಯೊಬ್ಬರು ಅಶೋಕಪುರಂ ಠಾಣೆಗೆ ದೂರು ನೀಡಿದ್ದಾರೆ.
ಮಹಿಳೆಯ ದೂರಿನ ಮೇರೆಗೆ ಅಶೋಕಪುರಂ ಪೊಳಿಸ್ ಠಾಣೆಯಲ್ಲಿ ಸೀನಿಯರ್ ಸೆಕ್ಷನ್ ಇಂಜಿನಿಯರ್‌ಗಳಾದ ಝಡ್. ಥಾಮಸ್, ಗೀತೇಶ್ ಸಿಂಗ್, ಸುಜಿತ್ ಮತ್ತು ಮಹಿಳಾ ಅಧಿಕಾರಿ ಪ್ರತಿಭಾ ಚೌಹಾಣ್ ಮೇಲೆ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.