19
ಕಲಬುರಗಿ: ನಗರದ ಬಸವೇಶ್ವರ ಕಾಲೋನಿಯ ಕೆಇಬಿ ಗಾರ್ಡನ್ ಸಮೀಪ ಅಪರಿಚಿತ ವ್ಯಕ್ತಿಯ ಮೃತದೇಹ ಶವ ಪತ್ತೆಯಾಗಿರುವ ಘಟನೆ ಭಾನುವಾರ ನಡೆದಿದೆ.
ಅಂದಾಜು 45 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಚರಂಡಿಯಲ್ಲಿ ಕಾಣಿಸಿದ ಮೃತದೇಹವನ್ನು ನೋಡಿದ ಬಸವೇಶ್ವರ ಕಾಲೋನಿಯ ನಿವಾಸಿಗಳು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಎಂ.ಬಿ.ನಗರ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ ಎಂದು ತಿಳಿದು ಬಂದಿದೆ.