ಹೊಳೆಹೊನ್ನೂರು: ವ್ಯಕ್ತಿಯೋರ್ವರಿಗೆ ನಕಲಿ ಬಂಗಾರ ನೀಡಿ ಲಕ್ಷಾಂತರ ರೂ. ವಂಚಿಸಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಭದ್ರಾವತಿ ತಾಲೂಕು ಹೊಳೆಹೊನ್ನೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಸಂತೆಬೆನ್ನೂರು ಎಸ್.ಬಿ.ಆರ್. ಕಾಲನಿ ನಿವಾಸಿ ರಾಮಪ್ಪ ಆಲಿಯಾಸ್ ಬೆಂಕಿ ರಾಮಪ್ಪ (65) ಎಂದು ತಿಳಿದು ಬಂದಿದೆ.
ಆರೋಪಿಯಿಂದ ವಂಚನೆ ಮಾಡಲಾಗಿದ್ದ 3.08 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಹೊಸಪೇಟೆ ನಗರದ ನಿವಾಸಿ ರಾಜೇಶ್ ಎಂಬವರಿಗೆ 2024ರ ಜುಲೈ 21 ರಂದು ಸುರೇಶ್ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿ ಅಸಲಿ ಬಂಗಾರ ಸಿಕ್ಕಿದೆ ಎಂದು ನಂಬಿಸಿ, ನಕಲಿ ಬಂಗಾರ ನೀಡಿ ಲಕ್ಷಾಂತರ ರೂ. ವಂಚಿಸಿದ್ದ ಎಂದು ತಿಳಿದು ಬಂದಿದೆ.
ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.