Home News ನಿಲ್ಲಿಸಿದ್ದ ಕಾರು ಕಳವುಗೈದ ಆರೋಪಿಯ ಬಂಧನ

ನಿಲ್ಲಿಸಿದ್ದ ಕಾರು ಕಳವುಗೈದ ಆರೋಪಿಯ ಬಂಧನ

by admin
0 comments

ಬೈಂದೂರು: ನಿಲ್ಲಿಸಿದ್ದ ಕಾರು ಕಳ್ಳತನಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಪೌಜಾನ್ ಅಹ್ಮದ್ ಎಂದು ತಿಳಿದು ಬಂದಿದೆ.

ಕಿರಿಮಂಜೇಶ್ವರ ಗ್ರಾಮದ ನಾಗೂರಿನ ಗೋವಿಂದ ರಾವ್ ರವರ ಜಿ ಎನ್ ಕಾಂಪ್ಲೆಕ್ಸ್‌ನ ಹೊರ ಭಾಗದಲ್ಲಿ ನಿಲ್ಲಿಸಿದ್ದ ಎಂಟು ಲಕ್ಷ ರೂ. ಮೌಲ್ಯದ ಮಾರುತಿ ಸ್ವಿಫ್ಟ್ ಕಾರು ಕಳವಾಗಿತ್ತು ಎಂದು ತಿಳಿದು ಬಂದಿದೆ.

ಈ ಕುರಿತು ಕಾರು ಮಾಲಕ ಗಣೇಶ್ ಆಚಾರ್ಯ ನೀಡಿರುವ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

banner

ಪ್ರಕರಣದ ಪತ್ತೆಗಿಳಿದ ಪೊಲೀಸ್‌ ಉಪಾಧೀಕ್ಷಕ ಹೆಚ್.ಡಿ. ಕುಲಕರ್ಣಿ ಮಾರ್ಗದರ್ಶನದಲ್ಲಿ ವಿಶೇಷ ತಂಡ ಆರೋಪಿ ಪೌಜಾನ್‌ ಅಹ್ಮದನ್ನು ಕಾರು ಸಹಿತ ಪತ್ತೆ ಮಾಡಿದೆ ಎಂದು ತಿಳಿದು ಬಂದಿದೆ.

ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎನ್ನಲಾಗಿದೆ.

You may also like

Leave a Comment

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.

Latest Articles

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.