ಶಿವಮೊಗ್ಗ: ನಗರದ ಹೊಸಮನೆಯಲ್ಲಿ ಪತಿಯ ಹಿಂಸೆಯ ವಿರುದ್ಧ ಮಹಿಳಾ ಠಾಣೆಗೆ ತನ್ನ ವಿರುದ್ಧ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪತಿ ಪತ್ನಿಗೆ ಚಾಕುವಿನಿಂದ ಇರಿದ ಘಟನೆ ಸಂಭವಿಸಿದೆ.
ಪ್ರೀತಿಸಿ ಮದುವೆಯಾಗಿದ್ದ ವಿನಯ್ ಕುಮಾರ್ ಪತ್ನಿ ಪದ್ಮಾವತಿಗೆ ಚಾಕುವಿನಿಂದ ಇರಿದು ಕೊಲೆ ಯತ್ನ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ಹೊಸಮನೆ ಎರಡನೇ ತಿರುವಿನಲ್ಲಿ ದಂಪತಿ ವಾಸವಾಗಿದ್ದು, 13 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ವಿನಯ್ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಕಳೆದ ಎರಡು ವರ್ಷದಿಂದ ಪತಿ ಪತ್ನಿಯರ ನಡುವೆ ವೈಮನಸ್ಸು ಆರಂಭವಾಗಿತ್ತು ಎನ್ನಲಾಗಿದ್ದು, ನಿನ್ನೆ ಇದು ಜೋರಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಳು. ಪತ್ನಿ ದೂರು ನೀಡಿರುವುದನ್ನೇ ಮನಸ್ಸಿನಲ್ಲಿಟ್ಟುಕೊಂಡು ವೇಳೆ ವಿನಯ್ ಕುಮಾರ್ ಕುತ್ತಿಗೆ ಹಿಸುಕಲು ಯತ್ನಿಸಿದ್ದ. ಆಗ ಅವಳು ಕಿರುಚಿಕೊಂಡಿದ್ದರು. ನಂತರ ಪತ್ನಿ ಅತ್ತೆ ಕೋಣೆಗಡ ಬಂದು ಮಲಗಿದ್ದರು. ಅಲ್ಲಿಗೆ ಚಾಕು ಹಿಡಿದುಕೊಂಡು ಬಂದ ವಿನಯ್ ಪತ್ನಿಯ ಪಕ್ಕೆಗೆ ಇರಿದಿದ್ದಾನೆ. ನಂತರ ಸ್ನೇಹಿತೆಗೆ ಹಾಗೂ 112 ಗೆ ಕರೆ ಮಾಡಿದ್ದು, ಪದ್ಮಾವತಿ ಅಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ.
ಪತ್ನಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು, ಚೇತರಿಕೆಯಲ್ಲಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.