ಬೆಂಗಳೂರು: ಸುಳ್ಳು ಕಥೆ ಕಟ್ಟಿ ಸಿಂಪತಿ ವೀಡಿಯೊ ಮಾಡಿದ್ದ ವಿಂಗ್ ಕಮಾಂಡರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ವಿಕಾಸ್ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಕಾರಿನ ನಂಬರ್ ಆಧಾರದಲ್ಲಿ ಶಿಲಾದಿತ್ಯಾ ಬೋಸೆ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಬಳಿಕ ವಿಂಗ್ ಕಮಾಂಡರ್ ಮಾಡಿದ್ದ ವೀಡಿಯೊದಲ್ಲಿ ಅವರ ಹಣೆಯಿಂದ ರಕ್ತ ಸೋರುತ್ತಿತ್ತು. ಯುವಕ ವಿಕಾಸ್ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಈ ರೀತಿಯಾಗಿದೆ ಎಂದು ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಬಿಂಬಿಸಿದ್ದರು. ಆದರೆ ಅಸಲಿ ಕಾರಣವೇ ಬೇರೆ ಇದೆ. ವಿಕಾಸ್‌ಗೆ ಡಿಚ್ಚಿ ಹೊಡೆಯಲು ಹೋಗಿ ವಿಂಗ್ ಕಮಾಂಡರ್ ಹಣೆಯಲ್ಲಿ ರಕ್ತ ಬರಿಸಿಕೊಂಡಿದ್ದಾರೆ ಎಂದು ಸಿಸಿಟಿವಿ ದೃಶ್ಯಗಳಿಂದ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಶಿಲಾದಿತ್ಯಾ ಬೋಸೆ ವಿರುದ್ಧ ಬಿಎನ್‌ಎಸ್ 109(ಕೊಲೆಯತ್ನ), 115(2)(ಮಾರಣಾಂತಿಕ ಹಲ್ಲೆ), 304(ಬಲವಂತವಾಗಿ ಮೈ ಮೇಲೆ ಇರುವ ವಸ್ತು ಕಿತ್ತುಕೊಳ್ಳುವುದು), 324(ಅರಿವಿಗೆ ಇದ್ದರೂ ವಸ್ತುಗಳನ್ನು ಉದ್ದೇಶ ಪೂರಕವಾಗಿ ಹಾಳು ಮಾಡುವುದು), 352 (ಶಾಂತಿ ಭಂಗ)ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.