31
ಅಡ್ಡೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಹೊರಬಿದ್ದಿದ್ದು, ಮೂಡುಬಿದಿರೆಯ ಪ್ರತಿಷ್ಠಿತ ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅಡ್ಡೂರಿನ ಆಮಿನಾ ಇಫಾ ಅವರು 584ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾ
ಪ್ರಥಮ ಭಾಷೆ ಇಂಗ್ಲಿಷ್ ನಲ್ಲಿ 99, ದ್ವಿತೀಯ ಭಾಷೆ ಹಿಂದಿಯಲ್ಲಿ 92, ಭೌತಶಾಸ್ತ್ರದಲ್ಲಿ 98, ರಾಸಾಯನ ಶಾಸ್ತ್ರದಲ್ಲಿ 99, ಗಣಿತದಲ್ಲಿ 98, ಜೀವಶಾಸ್ತ್ರದಲ್ಲಿ 98 ಸೇರಿ ಒಟ್ಟು 584 ಅಂಕಗಳನ್ನು ಪಡೆದುಕೊಂಡು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಅಡ್ಡೂರು ನಿವಾಸಿ ಮುಹಮ್ಮದ್ ಶಾಫಿ ಕೊಯ್ಯಾರ್ ಮತ್ತು ಅಸ್ಮ ದಂಪತಿಯ ಪುತ್ರಿಯಾಗಿದ್ದಾರೆ.