ಉಡುಪಿ: ಜಿಲ್ಲಾಧ್ಯಂತ ಮದ್ರಸಗಳು ಏಪ್ರಿಲ್ 8ರಂದು ಪುನಾರಂಭಕ್ಕೆ ಸಿದ್ಧತೆಗಳು ನಡೆಯುತಿದ್ದು, ಪುನಾರಂಭ ದಿನಾಂಕವನ್ನು ಮುಂದೂಡುವಂತೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಎಮ್.ಪಿ. ಮೊಯಿದಿನಬ್ಬ ಜಿಲ್ಲಾಧಿಕಾರಿಯನ್ನು ಆಗ್ರಹಿಸಿದ್ದಾರೆ.
ಪ್ರಸ್ತುತ ಬೇಸಿಗೆಯಲ್ಲಿ ವಿಪರೀತ ಬಿಸಿಲು ಸೆಖೆ ಇರುವುದರಿಂದ ಎಳೆ ಮಕ್ಕಳ ಅರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಅಲ್ಲದೆ ಶಾಲಾ ಕಾಲೇಜುಗಳಿಗೆ ರಜೆ ನೀಡಿರುವುದರಿಂದ ಮದ್ರಸ ಪುನಾರಂಭ ಮಾಡಿದರೆ ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಕೂಡ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಮದರಸ ಪುನಾರಂಭ ದಿನಾಂಕವನ್ನು ಮೇ ಆರಂಭದ ವರೆಗೆ ಮುಂದೂಡಿ ಆದೇಶಿಸಬೇಕೆಂದು ಉಡುಪಿ ಜಿಲ್ಲಾ ವಖ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಎಮ್.ಪಿ. ಮೊಯಿದಿನಬ್ಬ ಉಡುಪಿ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ.