Home News ರಿಯಲ್ ಎಸ್ಟೇಟ್ ಮಾಫಿಯಾ ತೃಪ್ತಿಪಡಿಸಲು, ಕೋಟ್ಯಾಂತರ ರೂ. ನದಿಗೆ ಸುರಿಯುತ್ತಿರುವ ಪಿಡಬ್ಲ್ಯೂಡಿ ಇಲಾಖೆ ?

ರಿಯಲ್ ಎಸ್ಟೇಟ್ ಮಾಫಿಯಾ ತೃಪ್ತಿಪಡಿಸಲು, ಕೋಟ್ಯಾಂತರ ರೂ. ನದಿಗೆ ಸುರಿಯುತ್ತಿರುವ ಪಿಡಬ್ಲ್ಯೂಡಿ ಇಲಾಖೆ ?

by admin
0 comments

ಬಜ್ಪೆ: ಬಜ್ಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಳವೂರು ಸೇತುವೆ ಕೆಳಗೆ ಭಾಗದ ಉಳ್ಳವರ ಖಾಸಗಿ ಜಮೀನಿಗೆ ಪಿಡ್ಲ್ಯೂಡಿ ಇಲಾಖೆಯಿಂದ ತಡೆಗೋಡೆ ನಿರ್ಮಿಸುವ ಕಾರ್ಯ ಭರದಿಂದ ಸಾಗುತ್ತಿದೆ.

ಪಿಡಬ್ಲ್ಯೂಡಿ ಇಲಾಖೆ ಶಾಂತವಾಗಿ ಹರಿಯುತ್ತಿದ್ದ ವಿಶಾಲವಾದ ಪಲ್ಗುಣಿ ನದಿಗೆ ತರಾತುರಿಯಿಂದ ಮಣ್ಣು ತುಂಬಿಸಿ ಖಾಸಗಿ ವ್ಯಕ್ತಿಯೊಬ್ಬರಿಗೆ ತಡೆಗೋಡೆ ನಿರ್ಮಿಸಿ ಉಳ್ಳವರನ್ನು ಉದ್ದಾರ ಮಾಡಲು ಹೊರಟಂತಿದೆ ಎಂದು ನಾಗರಿಕರು ದೂರಿಕೊಂಡಿದ್ದಾರೆ.

ಬಜ್ಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಈ ಪ್ರದೇಶದ ಕುರಿತು ಮುತುವರ್ಜಿ, ಕಾಳಜಿ ತೋರುತ್ತಿರುವ ಜನಪ್ರತಿನಿಧಿಗಳು, ಬಜ್ಪೆ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿದ ಬಳಿಕ ಜನಸಾಮಾನ್ಯರ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅನುದಾನವಿಲ್ಲದೆ ಒದ್ದಾಡುತ್ತಿರುವಾಗ, ಸುಮಾರು 4 ಕೊಟಿ ರೂ. ಅನುದಾನ ವಿನಿಯೊಗಿಸಿ ಈ ಖಾಸಗಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಜನರು ದೂರಿದ್ದಾರೆ.

ನದಿಗೆ ಮಣ್ಣು ತುಂಬಿಸುವುದರಿಂದ ಮಳೆಗಾಲದಲ್ಲಿ ರಭಸದಿಂದ ಹರಿಯುವ ನದಿಯ ನೀರು ಸರಾಗವಾಗಿ ಹರಿಯಲು ತಡೆಯಾಗಿ ಸಮೀಪದ ಜಮೀನು ಮತ್ತು ಮನೆಗಳಿಗೆ ಹಾನಿಯಾಗುವ ಸಾಧ್ಯತೆಗಳು ಹೆಚ್ಚಾಗಿದೆ.‌

ಒಟ್ಟಾರೆಯಾಗಿ ರಿಯಲ್ ಎಸ್ಟೇಟ್ ಮಾಫಿಯಾವನ್ನು ತೃಪ್ತಿಪಡಿಸಲು ಹೊರಟ ಪಿಡಬ್ಲ್ಯೂಡಿ ಇಲಾಖೆ ಸರಕಾರದ ಅನುದನಾ ಬಳಸಿಕೊಂಡು ಖಾಸಗಿಯವರ ತಡೆಗೊಡೆ ಕಾಮಗಾರಿ ಈ ಕೂಡಲೇ ನಿಲ್ಲಿಸಬೇಕು. ನದಿಗೆ ಹಾಕಿರುವ ಮಣ್ಣನ್ನು ತೆಗೆಯಬೇಕು ಎಂದು ಆಗ್ರಹಿಸಿರುವ ಬಜ್ಪೆ ನಾಗರೀಕ ಹಿತ ರಕ್ಷಣಾ ವೇದಿಕೆ, ಬಿಡಬ್ಲ್ಯುಡಿ ಇಲಾಖೆ ಉಳ್ಳವರ ಹಿತಕಾಯುವುದನ್ನು ಕೂಡಲೇ ನಿಲ್ಲಿಸದಿದ್ದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ನಾಗರಿಕರನ್ನು ಒಟ್ಟು ಸೇರಿಸಿ ಶೀಘ್ರವೇ ದೊಡ್ಡ ಮಟ್ಟದ ಹೋರಾಟ ಮತ್ತು ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದೆ.

You may also like

Leave a Comment

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.

Latest Articles

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.